ಗ್ಯಾಮೆಕ್ಸೇನ್
ಗ್ಯಾಮ್-ಬೆಂಜಿನ್ ಹೆಕ್ಸಕ್ಲೋರೈಡ್, C6H6CI6. 1,2,3,4,5,6-ಹೆಕ್ಸಕ್ಲೋರೋಸೈಕ್ಲೋಹೆಕ್ಸೇನಿನ ಗ್ಯಾಮ ಐಸೊಮರ್. ಇದರ ಇತರ ಹೆಸರುಗಳು : ಲಿಂಡೇನ್, ಬಿಎಚ್‍ಸಿ, 666. ಬಿಳಿಯ ಸ್ಫಟಿಕಾಕೃತಿಯ ಪುಡಿ. ಸ್ವಲ್ಪ ಹಳತುವಾಸನೆಯುಳ್ಳದ್ದು. ಕರಗುವ ಉಷ್ಣತೆ 112.50. ಸೆಂ. ಅಸಿಟೋನ್, ಬೆಂಜಿûೀನ್ ಮತ್ತು ಕ್ಲೋರೋಫಾರಮುಗಳಲ್ಲಿ ಯಥೇಚ್ಛವಾಗಿ ಲೀನವಾಗುವುದು. ಆಲ್ಕೊಹಾಲಿನಲ್ಲಿ ಪೂರ್ತಿ ದ್ರಾವ್ಯ, ಈಥೈಲ್ ಗ್ಲೈಕಾಲಿನಲ್ಲಿ ಸ್ವಲ್ಪ ಮಾತ್ರ ದ್ರಾವ್ಯ. ನೀರಿನಲ್ಲಿ ಅದ್ರಾವ್ಯ. ಚರ್ಮದ ಮುಖಾಂತರ ಹೀರುವುದು. ನುಂಗಿದರೆ ಸಾವು ಸಂಭವಿಸುವುದು. ಅಪಾಯಕಾರಿ. ಪ್ರಬಲ ಕೀಟನಾಶಕ. 
1945ರಲ್ಲಿ ಇಂಪೀರಿಯಲ್ ಕೆಮಿಕಲ್ ಇಂಡಸ್ಟ್ರೀಸಿನವರು ಪ್ರಥಮವಾಗಿ ಇದನ್ನು ಪ್ರಕಟಿಸಿದರು. ಡಿಡಿಟಿಗಿಂತಲೂ ಸ್ಥಿರವಾದ ಮತ್ತು ಅದಕ್ಕಿಂತಲೂ ಶೀಘ್ರವಾಗಿ ಪರಿಣಾಮಕಾರಿಯಾದ ಕೀಟನಾಶಕವಿದು. 

ಚಿತ್ರ-1

ಇದರ ಅಣು ಇತರ ಸ್ಟೀರಿಯೊ ಐಸೊಮರುಗಳಿಗಿಂತ ಚಿಕ್ಕದು. ಆದ್ದರಿಂದ ಇದು ಸುಲಭವಾಗಿ ತೂರಿಹೋಗಿ ಪರಿಣಾಮಕಾರಿಯಾಗಬಲ್ಲದು ಎಂದು ಮುಲ್ಲಿನ್ಸ್ ಅಭಿಪ್ರಾಯ.  ಬೀಟ ಐಸೊಮರಿನಂತಲ್ಲದೆ ಸೋಡಿಯಮ್ ಇಥಾಕ್ಸೈಡಿನ ಆಲ್ಕೊಹಾಲ್ ದ್ರಾವಣದೊಂದಿಗೆ ವರ್ತಿಸಿ ಹೈಡ್ರೊಜನ್ ಕ್ಲೋರೈಡನ್ನು ಸುಲಭವಾಗಿ ಬಿಟ್ಟುಕೊಡುವುದು. ಗ್ಯಾಮಕ್ಸೇನಿನ ಅಕ್ಕಪಕ್ಕದ ಮೂರು ಕ್ಲೋರಿನ ಪರಮಾಣುಗಳು ಅಕ್ಷದ ಸುತ್ತಲಿನ ಸ್ಥಾನಗಳಲ್ಲೂ ಉಳಿದ ಮೂರು ಪರಮಾಣುಗಳು ವೃತ್ತ ಸಮೀಪದ ಸ್ಥಾನಗಳಲ್ಲೂ ಇರುವುದಾಗಿ ಎಕ್ಸ್‍ಕಿರಣಗಳ ಅಧ್ಯಯನದಿಂದ ಗೊತ್ತಾಗಿದೆ. ಬೆಂಜಿóóೀನನ್ನು ಅತಿನೇರಿಳೆ ಬೆಳಕಿನ ಸಮ್ಮುಖದಲ್ಲಿ ಕ್ಲೋರಿನೀಕರಿಸುವುದರಿಂದ 12% ಗ್ಯಾಮಕ್ಸೇನ್ ಇರುವ ಸ್ಟಿರಿಯೊ ಐಸೊಮರುಗಳ ಮಿಶ್ರಣ ಉತ್ಪತ್ತಿಯಾಗುವುದು. ಈ ಮಿಶ್ರಣವನ್ನು ಅಂಶಿಕ ಸ್ಫಟಿಕೀಕರಿಸಿ ಗ್ಯಾಮೆಕ್ಸೇನ್‍ನನ್ನು ಬೇರ್ಪಡಿಸಬಹುದು. ಇದನ್ನು ಚೀಲಗಳಲ್ಲಿಯೂ ಪೀಪಾಯಿಗಳಲ್ಲಿಯೂ ಶೇಖರಿಸಿಡಬಹುದು.
(ಪಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ